
ಅಣ್ಣಾ ಭಾವೂ ಸಾಠೆ (೧೯೨೦-೧೯೬೯): ಯಾವ ತರಹದ ಶಿಕ್ಷಣವಿಲ್ಲದೆ ಓರ್ವ ಅಸಾಮಾನ್ಯ ವ್ಯಕ್ತಿಯಾಗಿ ಹೊರಹೊಮ್ಮಿದ ಅಣ್ಣಾಭಾವು ಸಾಠೆಯವರ ಜೀವನ ಒಂದು ಆಶ್ಚರ್ಯವೆ. ಅಣ್ಣಾಭಾವುರವರು ಮರಾಠಿ ಸಾಹಿತ್ಯದ ಓರ್ವ ಮೊದಲ ದರ್ಜೆಯ, ಹಾಗೂ ಮೊದಲ ಪೀಳಿಗೆಯ ದಲಿತ ಬರಹಗಾರರು ಎಂಬುದು ಗಮನಾರ್ಹ. ಅದರಂತೆ ಅವರು ಸ್ವಾತಂತ್ರ್ಯ ಪೂರ್ವಕಾಲದ ಮಹಾರಾಷ್ಟ್ರದ ಗ್ರಾಮೀಣ ಬದಕನ್ನು ಚಿತ್ರಿಸಿದ ಅಗ್ರಗಣ್ಯ ಸಾಹಿತಿಗಳಾಗಿದ್ದಾರೆ.
ಅಣ್ಣಾಭಾವೂರವರು ಮರಾಠಿ ಸಾಹಿತ್ಯದ ತಮಾಶಾವನ್ನು ವಾಗ್ನಟ್ಯವೆಂಬ ಗಂಭೀರ ಸ್ವರೂಪದ ಜಾನಪದ ನಾಟ್ಯವನ್ನಾಗಿ ಪರಿವರ್ತಿಸಿದರು.
ಅಣ್ಣಾಬಾವುರವರು ಗ್ರಾಮೀಣ ಬದುಕಿನಲ್ಲಿ ಹುಟ್ಟಿ, ಅಲ್ಲಿಯೇ ಬೆಳದು, ಭವವನ್ನು ನೀಗಿದವರು. ಅವರು ಕೇವಲ ಸಾಹಿತಿ, ಅಂದರೆ ಕವಿ, ಕಥೆಗಾರ, ಹಾಗೂ ಕಾದಂಬರಿಕಾರರಾಗಿರದೆ, ಓರ್ವ ಕಮ್ಯುನಷ್ಟ ಪಕ್ಷದ ನೇತಾರರಾಗಿದ್ದರು. ಅವರು ಕಮ್ಯುನಿಷ್ಟ ಪಕ್ಷದ ನ್ಯೂನತೆಗಳಿಂದ ದೂರವಿದ್ದುದ್ದರಿಂದ ಅವರ ಸಾಹಿತ್ಯ ಎಲ್ಲರಿಗೂ ಒದಲರ್ಹವಾಯಿತೆಂದು ಹೇಳಬೇಕು.